August 2, 2025

ಹೊಸ ಕುಂದುವಾಡದ ಸರ್ಕಾರಿ ಶಾಲೆಯಲ್ಲಿ ದಂತ ಸಂರಕ್ಷಣೆಯ ಮಹತ್ವದ ಜಾಗೃತಿ

ದಾವಣಗೆರೆ : ದಾವಣಗೆರೆ ದಕ್ಷಿಣ ವಲಯದ ಹೊಸ ಕುಂದುವಾಡದಲ್ಲಿನ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಮುಗುಳ್ನಗೆ ಸ್ವಸ್ಥ್ಯ ಕಾರ್ಯಕ್ರಮ ಅಡಿಯಲ್ಲಿ ದಂತ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರಕ್ಕೆ ದಾವಣಗೆರೆಯ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ದಂತ ವೈದ್ಯರು ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ದಂತ ಸಂರಕ್ಷಣೆಯ ಮಹತ್ವ, ಆರೋಗ್ಯಕರ ಹಲ್ಲಿನ ಉಪಯೋಗಗಳು ಹಾಗು ದಂತ ಸಂರಕ್ಷಣೆಯ ಉದಸೀನತೆಯಿಂದ ಎದುರಿಸ ಬೇಕಾದ ಅಪಾಯಗಳ ಕುರಿತು ಸವಿಸ್ತಾರವಾಗಿ ಸಮಗ್ರ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳ ದಂತ ತಪಾಸಣೆ ನಡೆಸಿ ಅಗತ್ಯ ಮಾಹಿತಿ ನೀಡಿದರು. ಅಗತ್ಯವಿರುವ ವಿದ್ಯಾರ್ಥಿಗಳಿಗೆ ದಾವಣಗೆರೆಯ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ನಲ್ಲಿ ಚಿಕಿತ್ಸೆ ಪಡೆಯಲು ಸಲಹೆ ನೀಡಲಾಯಿತು.
ಎಸ್ ಡಿಎಂಸಿ ಅಧ್ಯಕ್ಷ ಜೆ. ಸೋಮಶೇಖರಪ್ಪ, ಸದಸ್ಯರಾದ ಬಿ.ಎನ್, ಡಾ. ಪ್ರಶಾಂತ್ ಜಿ.ಎಂ ಹಾಗೂ ಡಾ. ವಿಜಯಲಕ್ಷ್ಮಿ ದೇವಾಂಗ ಮಠ, ಮುಖ್ಯ ಶಿಕ್ಷಕರಾದ ಸಿದ್ದಪ್ಪ ಕೆ, ಶಿಕ್ಷಕರಾದ ಕೆ.ಎ. ಮಲ್ಲಿಕಾರ್ಜುನ್, ಚಂದ್ರಾಕ್ಷಿ ಹಾಗೂ ಎಂ ಮಂಜುನಾಥ್ ಉಪಸ್ಥಿತರಿದ್ದರು.
ಟೆಕ್ನಿಷಿಯನ್ ಕುಮಾರಸ್ವಾಮಿ ಮತ್ತು ಅವರ ತಂಡದ ಉಸ್ತುವಾರಿ ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

error: Content is protected !!