August 2, 2025

ಉದ್ಯೋಗ ತರಬೇತಿಗೆ ಹೊಸ ಮೆರಗು ನೀಡಿದ ಸರ್ಕಾರಿ ಕಾಲೇಜು

  • ಕಾರ್ಪೊರೇಟ್ ಎಸ್‌ಎಪಿ ತರಬೇತಿ ಸಂಸ್ಥೆ ಅಡಿ ದಾವಣಗೆರೆ ಸರ್ಕಾರಿ ಕಾಲೇಜಿನಲ್ಲಿ ಉದ್ಯೋಗ ಸಾಧನೆಯ ಹೊಸ ಅಧ್ಯಾಯ

ದಾವಣಗೆರೆ: ನಗರದ ಪ್ರಖ್ಯಾತ ಶಿಕ್ಷಣ ಸಂಸ್ಥೆಯಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ಯಮ ಮಟ್ಟದ ತರಬೇತಿಯನ್ನು ಒದಗಿಸುವ ನಿಟ್ಟಿನಲ್ಲಿ ಇತಿಹಾಸದ ಪುಟವೊಂದನ್ನು ತೆರೆದಿದೆ. ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಮತ್ತು ಸ್ನಾತಕೋತ್ತರ ವಿಭಾಗದ ಸಹಯೋಗದಲ್ಲಿ, ಜಾಗತಿಕವಾಗಿ ಗುರುತಿಸಲ್ಪಟ್ಟ ಎಸ್‌ಎಪಿ ತರಬೇತಿ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಆರಂಭಿಸಲಾಗಿದೆ.

ಎಸ್‌ಎಪಿ ತರಬೇತಿಯ ಮಹತ್ವ ಇಂದಿನ ದಿನಗಳಲ್ಲಿ ವೇಗವಾಗಿ ಬದಲಾಗುತ್ತಿರುವ ವಾಣಿಜ್ಯ ಮತ್ತು ತಾಂತ್ರಿಕ ಜಗತ್ತಿನಲ್ಲಿ, ಉದ್ಯಮದ ಅವಶ್ಯಕತೆಗಳಿಗೆ ಹೊಂದಾಣಿಕೆಯಾಗುವ ಇಅರ್‌ಪಿ ತಂತ್ರಜ್ಞಾನದ ಬಳಕೆಯು ಅತ್ಯವಶ್ಯಕವಾಗಿದೆ. ಹಣಕಾಸು, ಮಾನವ ಸಂಪತ್ತು, ಲಾಜಿಸ್ಟಿಕ್ಸ್, ಸರಪಳಿ ನಿರ್ವಹಣೆ ಮುಂತಾದ ವಿಭಾಗಗಳನ್ನು ಒಗ್ಗೂಡಿಸಿ ಒಟ್ಟಾರೆ ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಎಸ್‌ಎಪಿ ನೌಕರಿ ಹಾಗೂ ಉದ್ಯಮದತ್ತ ಹೆಜ್ಜೆ ಇಡುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಲಾಭವನ್ನು ಒದಗಿಸುತ್ತದೆ.

ತರಬೇತಿ ಕಾರ್ಯಕ್ರಮದ ವಿಶೇಷತೆ

ಈ ವಿಶಿಷ್ಟ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರಿನ ಖ್ಯಾತ ವೃತ್ತಿಪರ ತರಬೇತಿ ಸಂಸ್ಥೆಯಾದ ಸುಮಂತ್ ಅಸೋಸಿಯೇಟ್ಸ್ ಸಹಯೋಗದಲ್ಲಿ ರೂಪಿಸಲಾಗಿದೆ. ಈ ಕಾರ್ಯಕ್ರಮವನ್ನು ಮೂರು ಹಂತಗಳಲ್ಲಿ ಜಾರಿಗೆ ತರಲಾಗುತ್ತಿದೆ:

ಹಂತ ೧: ಉದ್ಯಮ ತಜ್ಞರಿಂದ ೪೦ ಗಂಟೆಗಳ ಎಸ್‌ಎಪಿ ತರಬೇತಿ
ಮೊದಲ ಹಂತದಲ್ಲಿ ೪೦ ಗಂಟೆಗಳ ತೀವ್ರ ತರಬೇತಿ ನಡೆಯುತ್ತದೆ, ಇದನ್ನು ಅನುಭವಿ ಉದ್ಯಮ ತಜ್ಞರು ನಡೆಸುತ್ತಾರೆ. ಈ ತರಬೇತಿ ಕೋರ್ಸ್ನಲ್ಲಿ – ಇ.ಅರ್.ಪಿ ಮತ್ತು ಎಸ್.ಎ.ಪಿ  ಪರಿಚಯ – ವ್ಯವಸ್ಥೆಯ ನಾವಿಗೇಷನ್ ಮತ್ತು ಕಲಿಕೆ – ಹಣಕಾಸು, ವ್ಯವಸ್ಥಾಪನೆ ಮತ್ತು ಕಾರ್ಯನಿರ್ವಹಣೆಗೆ ಸಂಬAಧಿಸಿದ ಎಸ್.ಎ.ಪಿ  ಘಟಕಗಳು – ನೈಜ ಉದ್ಯಮದ ಪ್ರಕರಣ ಅಧ್ಯಯನಗಳು – ಪ್ರಾಯೋಗಿಕ ಅಭ್ಯಾಸ ಮತ್ತು ಸಿಸ್ಟಂ ಬಳಕೆ ಒಳಗೊಂಡಿರುತ್ತದೆ:

ಹಂತ ೨: ಉದ್ಯಮ ಇಂಟರ್ನ್ಶಿಪ್ ಅವಕಾಶಗಳು
ತರಬೇತಿಯ ನಂತರ, ವಿದ್ಯಾರ್ಥಿಗಳಿಗೆ ನೈಜ ಉದ್ಯಮದ ಪರಿಸರದಲ್ಲಿ ಎಸ್.ಎ.ಪಿಯ ಬಳಕೆಯನ್ನು ಅನುಭವಿಸಲು ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸಲಾಗುತ್ತದೆ.

ಹಂತ ೩: ಉದ್ಯೋಗಾವಕಾಶ ನೆರವು
ಮೇಲಿನ ಹಂತದಲ್ಲಿ ತರಬೇತಿ ಮತ್ತು ಇಂಟರ್ನ್ಶಿಪ್ ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ನೆರವು ಒದಗಿಸಲಾಗುತ್ತದೆ ಈ ತರಬೇತಿ ಕೋರ್ಸ್ನಲ್ಲಿ ಇ.ಅರ್.ಪಿ ಮತ್ತು ಎಸ್.ಎ.ಪಿ ಪರಿಚಯ, ಸಿಸ್ಟಂ ನಾವಿಗೇಷನ್, ಹಣಕಾಸು ಮತ್ತು ಮ್ಯಾನೇಜ್ಮೆಂಟ್ ಮೋಡ್ಯೂಲ್‌ಗಳ ಕಾರ್ಯವಿಧಾನ, ನೈಜ ಉದ್ಯಮದ ಪ್ರಕರಣ ಅಧ್ಯಯನ ಹಾಗೂ ಪ್ರಾಯೋಗಿಕ ಅಭ್ಯಾಸಗಳನ್ನು ಒಳಗೊಂಡಿರುತ್ತದೆ.

ಈ ವಿಶೇಷ ಎಸ್.ಎ.ಪಿ ಕಾರ್ಯಕ್ರಮದಲ್ಲಿ ಎಂಬಿಎ ಮತ್ತು ಎಂಕಾಮ್‌ನ ೧೪೦ ವಿದ್ಯಾರ್ಥಿಗಳು ನೋಂದಾಯಿಸಿಕೊAಡಿದ್ದು, ವಿದ್ಯಾರ್ಥಿಗಳ ಉದ್ಯೋಗ ನೇರವಿಗೆ ಇದು ಬಹುದೊಡ್ಡ ವೇದಿಕೆಯಾಗುತ್ತಿದೆ.

ಈ ತರಬೇತಿ ಯೋಜನೆಯ ಮೂಲಕ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗಾವಕಾಶಗಳು ಲಭ್ಯವಾಗುತ್ತಿದ್ದು, ಸ್ಥಳೀಯ ವಿದ್ಯಾರ್ಥಿಗಳ  ಸಮರ್ಥ ಸಬಲತೆಯತ್ತ ದಿಟ್ಟ ಹೆಜ್ಜೆಯಾಗಿದೆ.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರದ ಪ್ರೊ. ಬಿ.ಸಿ ತಸೀಲ್ದಾರ್, ಬೆಂಗಳೂರಿನ ಅಸೋಸಿಯೇಟ್ಸ್ ಸಂಸ್ಥಾಪಕರು, ಸಿ.ಎ. ಸುಮಂತ್, ಹಾಗೂ ಸುಮಂತ್, ಬೆಂಗಳೂರಿನ ಶಿಕ್ಷಣ ತಜ್ಞರಾದ ಡಾ. ಇಗ್ನೇಷಿಯಸ್ ಬಿ, ಮತ್ತು ಪ್ಲೇಸ್ಮೆಂಟ್ ಸೆಲ್ ಸಂಚಾಲಕರಾದ ಡಾ. ವೆಂಕಟೇಶ್ ಬಾಬು, ಉಪಸ್ಥಿತರಿಂದರು.

error: Content is protected !!