- ಚಿಕ್ಕಮಗಳೂರು : ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವರಾದ ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿ ಸಾರಥ್ಯದಲ್ಲಿ ಪ್ರಸಿದ್ಧ ವೈದ್ಯ ಡಾ.ಜೆ.ಪಿ.ಕೃಷ್ಣೆಗೌಡ ಅವರ ಪುತ್ರಿ ಡಾ. ವರ್ಷಾ ಮತ್ತು ಅವರ ತಂಡದ ಹಲವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ಆರ್. ದೇವರಾಜಶೆಟ್ಟಿ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡು ಶುಭ ಕೋರಿದರು.
ಡಾ.ಸಿ.ಟಿ.ರವಿ ಅವರು ಡಾ. ವರ್ಷಾ ಅವರಿಗೆ ಸದಸ್ಯತ್ವದ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು.
ಪಕ್ಷ ಸೇರಿದ ಡಾ.ವರ್ಷಾ ಅನಿಸಿಕೆ ಹಂಚಿಕೊಂಡು, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ನಾಯಕತ್ವ, ದಕ್ಷ ಆಡಳಿತ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ನನ್ನ ರಾಜಕೀಯ ಗುರುಗಳಾದ ಡಾ.ಸಿ.ಟಿ.ರವಿ ನಾಯಕತ್ವ ಮೆಚ್ಚಿಕೊಂಡು ದೇಶದ ಅಭಿವೃದ್ಧಿ ಬೆಂಬಲಿಸಲು ಸ್ವ ಇಚ್ಛೆಯಿಂದ ಬಿಜೆಪಿ ಸಂತೋಷದಿಂದ ಸೇರುತ್ತಿರುವುದಾಗಿ ಹರ್ಷ ವ್ಯಕ್ತಪಡಿಸಿದರು.
ಡಾ.ಜೆ.ಪಿ. ಕೃಷ್ಣೆಗೌಡ ಮಾತನಾಡಿದರು. ಮಾಜಿ ಶಾಸಕ ದೊಡ್ಡನಗೌಡ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ವೀಣಾಶೆಟ್ಟಿ, ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಬಿಜೆಪಿ ರಾಜ್ಯ ಒಬಿಸಿ ಕಾರ್ಯದರ್ಶಿ ಬಿ.ರಾಜಪ್ಪ, ಹಿರಿಯ ಮುಖಂಡ ಕೋಟೆ ರಂಗನಾಥ್ ಇತರರು ಹಾಜರಿದ್ದರು.
ಈ ಸಂದರ್ಭದಲ್ಲಿ ಮಹೇಶ್ ಕೂಡ ಪಕ್ಷ ಸೇರಿದರು. ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಕೌಶಿಕ್ ಸ್ವಾಗತಿಸಿ, ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಬಸವರಾಜ್ ನಿರೂಪಿಸಿದರು.
More Stories
ಆರೂಡ ದಾಸೋಹಿ ಶರಣ ಮಾಗನೂರು ಬಸಪ್ಪ ರಾಜ್ಯ ಪ್ರಶಸ್ತಿಗೆ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಆಯ್ಕೆ
ಹೊಸ ಕುಂದುವಾಡದ ಸರ್ಕಾರಿ ಶಾಲೆಯಲ್ಲಿ ದಂತ ಸಂರಕ್ಷಣೆಯ ಮಹತ್ವದ ಜಾಗೃತಿ
ಉದ್ಯೋಗ ತರಬೇತಿಗೆ ಹೊಸ ಮೆರಗು ನೀಡಿದ ಸರ್ಕಾರಿ ಕಾಲೇಜು