ಆರೂಡ ದಾಸೋಹಿ ಶರಣ ಮಾಗನೂರು ಬಸಪ್ಪ ರಾಜ್ಯ ಪ್ರಶಸ್ತಿಗೆ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಆಯ್ಕೆ
ದಾವಣಗೆರೆ : ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಹೆಸರಿನಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ(ರಿ) ಕೊಡುವ ರಾಜ್ಯ ಮಟ್ಟದ ೨೦೨೫ ರ ಸಾಲಿನ “ಆರೂಡ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ” ಗೆ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಪುರಸ್ಕೃತರಾಗಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಹಾಗೂ ಶರಣ ಮಾಗನೂರು ಬಸಪ್ಪ ಟ್ರಸ್ಟ್ ನ ಅಧ್ಯಕ್ಷ ಮಾಗನೂರು ಸಂಗಮೇಶ್ವರ ಗೌಡರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಶರಣ ಮಾಗನೂರು ಸಂಗಮೇಶ್ವರ ಗೌಡರು ಅವರ ನೇತೃತ್ವದಲ್ಲಿ ನಡೆದ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ೨೦೨೫ ರ ಸಾಲಿನ ಪ್ರಶಸ್ತಿಯನ್ನು ನ್ಯಾಯಾಂಗ ಇಲಾಖೆ, ಸಾಮಾಜಿಕ ಚಟುವಟಿಕೆ, ಸಾಹಿತ್ಯ ಕ್ಷೇತ್ರ ವಿಶೇಷವಾಗಿ ವಚನ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಶಸ್ತಿಯು ರೂ.೫೦,೦೦೦ ನಗದು, ಪ್ರಶಸ್ತಿ ಫಲಕ, ಶಾಲು, ಫಲ ತಾಂಬೂಲಗಳನ್ನು ಒಳಗೊಂಡಿದೆ. ಆಯ್ಕೆ ಸಮಿತಿ ಸದಸ್ಯರುಗಳಾದ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ, ಡಾ.ನಾ.ಲೋಕೇಶ ಒಡೆಯರ್, ಡಾ.ಹೆಚ್.ವಿ.ವಾಮದೇವಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಹಾಗೂ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಉಪಸ್ಥಿತರಿದ್ದರು.
More Stories
ಹೊಸ ಕುಂದುವಾಡದ ಸರ್ಕಾರಿ ಶಾಲೆಯಲ್ಲಿ ದಂತ ಸಂರಕ್ಷಣೆಯ ಮಹತ್ವದ ಜಾಗೃತಿ
ಉದ್ಯೋಗ ತರಬೇತಿಗೆ ಹೊಸ ಮೆರಗು ನೀಡಿದ ಸರ್ಕಾರಿ ಕಾಲೇಜು
ಕಲುಷಿತ ನೀರು ಪೂರೈಸುವ ಸ್ಥಳೀಯ ಸಂಸ್ಥೆಗೆ ನೋಟಿಸ್ – ಖಂಡ್ರೆ