ದಾವಣಗೆರೆ (ಭರಮಸಾಗರ): ದೇಶದ ಯಾವುದೇ ಗಣ್ಯರು ಇನ್ನುಮುಂದೆ ಮೃತರಾದರೆ ಹಾಗೂ ರಾಷ್ಟ್ರೀಯ ಹಬ್ಬದ ದಿನ ಸರ್ಕಾರಿ ರಜೆ ನೀಡಬಾರದು ಎಂದು ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಆಗ್ರಹಪಡಿಸಿದರು.
ಚಿತ್ರದುರ್ಗ ತಾಲ್ಲೂಕು ಭರಮಸಾಗರದಲ್ಲಿ ಒಂಭತ್ತು ದಿನಗಳ ಕಾಲ ಆಯೋಜಿಸಿದ್ದ ತರಳಬಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಗಣ್ಯರು ಮೃತರಾದಾಗ ರಜೆ ನೀಡುವುದು ಅರ್ಥಹೀನವಾಗುತಗತಿದೆ. ರಾಷ್ಟ್ರೀಯ ಹಬ್ಬಗಳಲ್ಲೂ ರಜೆ ನೀಡುವುದು ಲೋಕರೂಢಿಯ ಶಾಸ್ತ್ರವಾಗಿ ಮಾತ್ರ ಉಳಿದಿದೆ. ಇದು ಭಾರತೀಯ ಶಿಕ್ಷಣ ವೈಫಲ್ಯವೂ ಹೌದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬದ ದಿನ ಅದರ ಮಹತ್ವದ ಅರಿವು ಮೂಡಿಸಬೇಕು. ಅದಕ್ಕೆ ಉಪನ್ಯಾಸ, ಚಲನಚಿತ್ರ ವೀಕ್ಷಣೆ ಮಾಡಿಸಿದರೆ ಮಕ್ಕಳಲ್ಲಿ ಜ್ಞಾನ ವಿಕಾಸವಾಗಲು ಸಹಾಯಕವಾಗುತ್ತದೆ ಎಂದರು.
ಥಾಮಸ್ ಆಲ್ವ ಎಡಿಸನ್ ಜಾಗತಿಕ ವ್ಯಕ್ತಿಯಾಗಲು ಆತ ತಾಯಿ ಕಾರಣ
ಅತ್ಯಂತ ದಡ್ಡ ವ್ಯಕ್ತಿಯೂ ಶ್ರೇಷ್ಠ ವ್ಯಕ್ತಿಯಾಗಲು ತಾಯಂದಿರ ಪರಿಶ್ರಮ ಕಾರಣವಾಗುತ್ತದೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಥಾಮಸ್ ಆಳ್ವ ಎಡಿಸನ್ ತಾಯಿ ಯಶೋಗಾಥೆ ಪ್ರಸ್ತಾಪಿಸಿದರು.
ಅತ್ಯಂತ ದಡ್ಡ ಎಂದು ಶಾಲೆಯಿಂದ ವಾಪಸು ಕಳುಹಿಸಿದ್ದ ಎಡಿಸನ್ ಗೆ ಆತನ ತಾಯಿಯೇ ಶಿಕ್ಷಣ ನೀಡಿ ಬೆಳೆಸುತ್ತಾಳೆ. ಆತ ವಿಶ್ವ ಮೆಚ್ಚುವ ವ್ಯಕ್ತಿಯಾಗಿ ಜಗತ್ತಿಗೆ ಬೆಳಕು ನೀಡುತ್ತಾನೆ ಎಂದು ತಾಯಂದಿರ ಜವಾಬ್ದಾರಿ ಏನಾಗಬೇಕೆಂಬುದನ್ನು ನೆನಪಿಸಿದರು.
More Stories
ಮಾತೃಭಾಷೆಕನ್ನಡವನ್ನು ಉಳಿಸಿ-ಬೆಳೆಸುವ ಜವಾಬ್ದಾರಿಎಲ್ಲರ ಮೇಲಿದೆ : ಶಾಸಕ ತಮ್ಮಯ್ಯ
ಕೊಂಡಜ್ಜಿ ಕೆರೆಯನ್ನು ಪ್ರವಾಸಿ ತಾಣವಾಗಿಸಲು ಕ್ರಮ ಬಾಲಕಿಯರ ಜಲಸಾಹಸ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ಕವಿತೆಗಳಲ್ಲಿ ಹೊಸತನ ಮೂಡಬೇಕಿದೆ – ವಿಜಯ ಅಮೃತ್ ರಾಜ್*