ದಾವಣಗೆರೆ (ಭರಮಸಾಗರ): ತೆರಿಗೆ ಹಣದಲ್ಲಿ ಆಮಿಷವೊಡ್ಡಿ ಚುನಾವಣೆ ನಡೆಸುವ ಕ್ರಮವನ್ನು ನ್ಯಾಯಾಲಯವೇ ಇತ್ಯರ್ಥ ಮಾಡಬೇಕಿದೆ ಎಂದು ರಾಜ್ಯ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಹೇಳಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದಲ್ಲಿ ಸಿರಿಗೆರೆ ಮಠದ ತರಳಬಾಳು ಹುಣ್ಣುಮೆ ಮಹೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ನ್ಯಾಯಾಲಯ ಮತ್ತು ಸಮಾಜ ವಿಷಯ ಕುರಿತು ಉಪನ್ಯಾಸ ನೀಡಿದರು.
ಚುನಾವಣೆ ಗೆಲ್ಲಲು ಉಚಿತ ಯೋಜನೆ ಪ್ರಕಟಿಸಲಾಗುತ್ತಿದೆ. ಇದರಿಂದ ಜನ ಸೋಮಾರಿಗಳಾಗುತ್ತಿದ್ದಾರೆ. ಖಜಾನೆ ಖಾಲಿ ಮಾಡಿ ಅಧಿಕಾರ ಪಡೆಯುವ ಕ್ರಮವನ್ನು ನ್ಯಾಯಾಲಯವೇ ಇತ್ಯರ್ಥ ಮಾಡಬೇಕಾಗುತ್ತದೆ ಎಂದು ಹೇಳಿದರು.
ಭ್ರಷ್ಟಾಚಾರ ವಿಷ ವರ್ತುಲದಂತೆ ಸಕ್ರಿಯವಾಗಿದೆ. ಚುನಾವಣೆಗೆ ಹಾಕುವ ಬಂಡವಾಳ ಅಧಿಕಾರ ಸಿಕ್ಕಾಗ ವಾಪಾಸು ಪಡೆಯಲಾಗುತ್ತದೆ. ಈ ಬಗ್ಗೆ ನ್ಯಾಯಾಲಯ ಮಧ್ಯ ಪ್ರವೇಶ ಮಾಡಬೇಕಿದೆ.
ಶಾಸಾಕಾಂಗ, ಕಾರ್ಯಾಂಗದ ಸಮಸ್ಯೆಗಳನ್ನು ನ್ಯಾಯಾಂಗ ಪರಿಹರಿಸುತ್ತಿದೆ. ಈಗ ನ್ಯಾಯಾಂಗ ಪ್ರಜರ್ ಕುಕ್ಕರ್ ನಂತೆ ಒತ್ತಡ ಅನುಭವಿಸುತ್ತಿದೆ. ಇದು ಯಾವಾಗ ಬೇಕಾದರೂ ಬ್ಲಾಷ್ಟ್ ಆಗಬಹುದು ಎಂದು ಹೇಳಿದರು.
ಜನರಿಗೆ ನ್ಯಾಯ ನೀಡುವ ನ್ಯಾಯಾಂಗಕ್ಕೆ ಕಾಯಕಲ್ಪ ನೀಡದೆ ಹೋದರೆ ಬಹಳ ದೊಡ್ಡ ಸಂಕಷ್ಟ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಜನರು ನ್ಯಾಯ ಮಾರ್ಗ ಬಿಡಬಾರದು. ಜನ ನಾಯಕರು ಸಮಾಜದಲ್ಲಿ ಮಾದರಿ ಆಗಿರಬೇಕು ಎಂದರು.
ಸಿರಿಗೆರೆ ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
More Stories
ಜವಹರ್ ನವೋದಯ ವಿದ್ಯಾರ್ಥಿಗಳಿಗೂ “ಸಕ್ಷಮ” ವಿಸ್ತರಿಸಲು ಪೋಷಕರ ಮನವಿ
ಭದ್ರಾ ನಾಲೆ ಅಕ್ರಮ ಪಂಪ್ ಸೆಟ್ ತೆರವು ಕಾರ್ಯಾಚರಣೆ
ಭ್ರಷ್ಟಾಚಾರ, ದುರಾಸೆಗೆ ಸಂತೃಪ್ತಿಯ ಮದ್ದು ಹಚ್ಚಬೇಕಿದೆ ತರಳಬಾಳು ಹುಣ್ಣಿಮೆಯಲ್ಲಿ ನ್ಯಾ. ಎನ್. ಸಂತೋಷ ಹೆಗ್ಡೆ ಅಭಿಮತ