ಗಂಗಾವತಿ: ಕನ್ನಡ ಭಾಷೆಯ ಪ್ರಜ್ಞೆ ಇರದ ಕನ್ನಡ ಮತ್ತು ಸಂಸ್ಕ್ರತಿ ಸಚಿವರನ್ನು ಸಚಿವ ಸ್ಥಾನದಿಂದ ಕಿತ್ತಿ ಹಾಕ ಬೇಕೆಂದು ವೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಅರ್ಜುನ್ ನಾಯಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಕಳೆದ ಎರಡು ದಿನಗಳ ಹಿಂದೆ ಕಾರಟಗಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ ಅವರು ಶುಭವಾಗಲಿ ಎನ್ನುವ ಪದವನ್ನೆ ಸರಿಯಾಗಿ ಬರೆಯದೆ ತಪ್ಪಾಗಿ ಬರೆದು ಮಕ್ಕಳ ಎದುರಿಗೆ ಅವಮಾನಗೊಂಡಿದ್ದಾರೆ.
ಅಂಗನವಾಡಿ ಮಕ್ಕಳ ಮುಂದೆ ನಗಿಪಾಟಿಲು ವಾಗಿರುವ ಕನ್ನಡ ಮತ್ತು ಸಂಸ್ಕ್ರತಿ ಸಚಿವರಿಗೆ ಕನ್ನಡ ಭಾಷೆಯ ಪ್ರಜ್ಞೆ ಇರದೆ ಇದ್ದಾಗ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯನ್ನು ನಿಭಾಯಿಸಲು ಹೇಗೆ ಸಾದ್ಯವಾಗುತ್ತದೆ ಎಂದು ದೂರಿದ್ದಾರೆ. ಅಂಗನವಾಡಿ ಕೇಂದ್ರದ ನಾಮಫಲಕದಲ್ಲಿ ಶುಭವಾಗಲಿ ಎನ್ನುವದನ್ನು ಬರೆಯುವದಕ್ಕೆ ತಬ್ಬಿಬ್ಬರಾಗಿರುವ ಸಚಿವರು ಪಕ್ಕದಲ್ಲಿರುವವರು ಹೇಳುವ ತನಕ ಶುಭವಾಗಲಿ ಎನ್ನುವ ಪದ ಸರಿಯಾಗಿ ಬರೆಯಲಿಲ್ಲ. ಸಚಿವರಿಗೆ ಕನ್ನಡ ಭಾಷೆಯ ಪ್ರಜ್ಞೆ ಇಲ್ಲ. ಅಲ್ಲದೇ ಸುವರ್ಣ ಸಂಭ್ರಮ ಆಚರಣೆಯ ಸಂದರ್ಭದಲ್ಲಿ ಇಂತಹ ಕನ್ನಡ ಭಾಷೆಗೆ ಅವಮಾನಿಸಿರುವ ಸಚಿವರನ್ನು ಕೂಡಲೆ ಸಚಿವ ಸಂಪುಟದಿಂದ ಕಿತ್ತಿ ಹಾಕ ಬೇಕೆಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳು ಕನ್ನಡ ಭಾಷೆಗೆ ಆದ್ಯೇತೆ ನೀಡ ಬೇಕೆಂದು ಪದೆ ಪದೆ ಸಭೆ ಸಮಾರಂಭಗಳಲ್ಲಿ ಎಚ್ಚರಿಸುತ್ತಿದ್ದಾರೆ. ಆದರೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರೆ ಕನ್ನಡ ಭಾಷೆಯನ್ನು ಕೊಲ್ಲುತ್ತಿರುವದು ದೊಡ್ಡ ದುರಂತವಾಗಿದೆ ಎಂದು ಅಕ್ರೋಶ ವ್ಯಕ್ತ ಪಡಿಸಿದ್ದಾರೆ. ಈಚೆಗೆ ಸುವರ್ಣ ಸಂಭ್ರಮ ವರ್ಷದ ಪ್ರಶಸ್ತಿಗಳನ್ನು ಆಯ್ಕೆ ಮಾಡುವಲ್ಲಿ ವಿಫಲರಾಗಿರುವ ಸಚಿವರಿಗೆ ಕನ್ನಡಕ್ಕಾಗಿ ದುಡಿದವರನ್ನು ಗುರಿತಿಸುವಲ್ಲಿ ವಿಫಲರಾಗಿದ್ದಾರೆ. ಗಂಧ ಗಾಳಿ ಗೊತ್ತಿರದ ಸಚಿವರಿಗೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನೀಡಿರುವದು ಸರಿಯೇ ಎಂದು ದೂರಿದ್ದಾರೆ. ಇಂತಹ ಸಚಿವರನ್ನು ಕೈ ಬಿಡ ಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಸಂಘಟನೆಗಳಿಂದ ಹೋರಾಟ ನಡೆಸಲಾಗುತ್ತದೆ ಎಂದು ಅರ್ಜುನ್ ನಾಯಕ ಎಚ್ಚರಿಸಿದ್ದಾರೆ.
More Stories
ಮಾಹಿತಿ ಹಕ್ಕು ಕಾಯ್ದೆ ಪಾವಿತ್ರ್ಯ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿದೆ: ಕೆ.ವಿ.ಪಿ
ವೀರಪ್ಪಜ್ಜನವರದು ಅಪರೂಪದ ಅವತಾರ-ಅಡವಿಸಿದ್ಧೇಶ್ವರ ಶ್ರೀಗಳು
ಕಣ್ವ ಜಲಾಶಯದಲ್ಲಿ ಡಿಸಿಎಂ ಡಿಕೆಶಿ ಬೋಟ್ ರೈಡ್.!