April 28, 2025

ಭ್ರಷ್ಟಾಚಾರ, ದುರಾಸೆಗೆ ಸಂತೃಪ್ತಿಯ ಮದ್ದು ಹಚ್ಚಬೇಕಿದೆ ತರಳಬಾಳು ಹುಣ್ಣಿಮೆಯಲ್ಲಿ ನ್ಯಾ. ಎನ್. ಸಂತೋಷ ಹೆಗ್ಡೆ ಅಭಿಮತ

ದಾವಣಗೆರೆ (ಭರಮಸಾಗರ): ದುರಾಸೆಯಿಂದ ಭ್ರಷ್ಟಾಚಾರ ಹೆಚ್ಚಾಗಿ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ವಿಷಾದ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದಲ್ಲಿ ಶನಿವಾರ ನಡೆಯುತ್ತಿರುವ ಸಿರಿಗೆರೆ ಮಠದ 5ನೇ ದಿನದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದುರಾಸೆ ಇವತ್ತಿನ‌ ಪರಿಸ್ಥಿತಿಗೆ ಕಾರಣ. ಹಿರಿಯರು ಕಟ್ಟಿದ ಮೌಲ್ಯಗಳು ಹಾಳಾಗುತ್ತಿವೆ. ದೇಶದ ಅಭಿವೃದ್ಧಿಗಿಂತ ದುರಾಸೆಯ ಅಭಿವೃದ್ಧಿ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

52 ಲಕ್ಷ ರೂ. ಜೀಪ್ ಹಗರಣ, 64 ಕೋಟಿ ರೂ. ಬೋಪರ್ಸ್ ಹಗರಣ, 70 ಸಾವಿರ ಕೋಟಿ ರೂ. ಕಾಮನ್ ವೆಲ್ತ್ ಗೇಮ್ಸ್ ಹಗರಣ, 1.76 ಲಕ್ಷ ಕೋಟಿ ರೂ. 2 ಜಿ ಹಗರಣಗಳಲ್ಲಿ ಎಷ್ಟೊಂದು ತೆರಿಗೆ ಹಣ ಸೋರಿಕೆ ಆಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದಂತೆ ಒಂದು ರೂಪಾಯಿಯಲ್ಲಿ 85 ಪೈಸೆ ಸೋರಿಕೆಯಾಗುತ್ತಿದೆ ಎಂಬ ಮಾತು ಅಂದಿನ ಇಂದಿನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಇಂದಿನ‌ ಶೈಕ್ಷಣಿಕ ಪಠ್ಯ ಬರಿ ಹಣ ಮಾಡುವುದನ್ನು ಕಲಿಸುತ್ತಿದೆ. ಮೊಬೈಲ್ ನಲ್ಲಿ ಮೌಲ್ಯಗಳು ಇರುವುದಿಲ್ಲ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಇರಬೇಕಾದರೆ ಪ್ರಾಮಾಣಿಕತೆ ಮತ್ತು ತೃಪ್ತಿ ಆಳುವ ವರ್ಗದಲ್ಲಿ ಇರಬೇಕು ಎಂದರು.

ಸಿರಿಗರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು.

error: Content is protected !!