March 14, 2025

ಧಾರ್ಮಿಕ ಮೌಲ್ಯಗಳ ಪರಿಪಾಲನೆಯಿಂದ ಸುಖ ಶಾಂತಿ : ಶ್ರೀ ರಂಭಾಪುರಿ ಜಗದ್ಗುರುಗಳು 

ಫೆ. 03 ಧೂಳಖೇಡ 01: ಸಮೀಪದ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದ ಗ್ರಾಮದೇವ ಶ್ರೀ ಸಿದ್ಧೇಶ್ವರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ

ಧೂಳಖೇಡ: ಸಜ್ಜನ ಸತ್ಪುರುಷರ ಸಂಗಮದಲ್ಲಿ ಬೆಳೆದು ಬಂದಾಗ ಬದುಕು ಉಜ್ವಲಗೊಳ್ಳುವುದು. ಧಾರ್ಮಿಕ ಮೌಲ್ಯಗಳ ಪುನರುತ್ಥಾನ ಮತ್ತು ಪರಿಪಾಲನೆಯಿಂದ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ತಾಲೂಕಿನ ಲೋಣಿ ಬಿ.ಕೆ. ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬದುಕು ಎಷ್ಟು ಶ್ರೀಮಂತವಾಗಿದೆ ಅನ್ನುವುದಕ್ಕಿಂತ ಎಷ್ಟು ನೆಮ್ಮದಿಯಿಂದ ಇದ್ದೇವೆ ಎಂಬುದು ಮುಖ್ಯ. ಭಾವನೆ ಒಳ್ಳೆಯದಿದ್ದರೆ ಭಾಗ್ಯ ಬೆನ್ನತ್ತಿ ಬರುತ್ತದೆ. ವಿನಯ ನಿನ್ನಲ್ಲಿದ್ದರೆ ವಿಜಯ ನಿನ್ನದಾಗುವುದರಲ್ಲಿ ಸಂದೇಹವಿಲ್ಲ. ಸಹನೆ ನಿನ್ನದಾದರೆ ಸಕಲವು ನಿನ್ನದಾಗುವುದೆಂದು ಪೂರ್ವಜರು ಹೇಳಿದ್ದಾರೆ. ನಿನ್ನೆ ಸುಖ ಇತ್ತೆಂದು ಇತಿಹಾಸ ಹೇಳುತ್ತದೆ. ನಾಳೆ ಸುಖ ಇರುವುದೆಂದು ವಿಜ್ಞಾನ ಹೇಳುತ್ತದೆ. ಆದರೆ ಸತ್ಯ ಧರ್ಮ ಮಾರ್ಗದಲ್ಲಿ ನಡೆದರೆ ಇಂದೇ ಸುಖ ಶಾಂತಿ ದೊರಕುವುದೆಂದು ಧರ್ಮ ಹೇಳುತ್ತದೆ. ಪ್ರಾಚೀನ ಇತಿಹಾಸ ಪವಿತ್ರ ಪರಂಪರೆ ಹೊಂದಿರುವ ಶ್ರೀ ಸಿದ್ಧೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮ ಸಮಾರಂಭಗಳನ್ನು ಸಂಯೋಜಿಸಿರುವುದು ತಮ್ಮೆಲ್ಲರ ಧರ್ಮ ಶ್ರದ್ಧೆಗೆ ಈ ಸಮಾರಂಭ ಸಾಕ್ಷಿಯಾಗಿದೆ ಸಿದ್ದೇಶ್ವರ ಕಮೀಟಿ ಅಧ್ಯಕ್ಷರು, ಆಡಳಿತ ಮಂಡಳಿ ಮತ್ತು ಸಮಸ್ತ ಗ್ರಾಮಸ್ಥರ ಧರ್ಮ ಶ್ರದ್ಧೆಗೆ ಶ್ರೀಗಳು ಹರುಷ ವ್ಯಕ್ತ ಪಡಿಸಿದರು.

ಈ ಪವಿತ್ರ ಸಮಾರಂಭದಲ್ಲಿ ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ನಾಗಠಾಣ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹತ್ತಳ್ಳಿ ಗುರುಪಾದೇಶ್ವರ ಶಿವಾಚಾರ್ಯರು, ತಡವಾಳ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಪಾನಮಂಗಳೂರಿನ ಶಿವಯೋಗಿ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಮಾಜಿ ಶಾಸಕ ರಾಜು ಆಲಗೂರು, ವಿಠ್ಠಲಗೌಡ ಯಶವಂತರಾಯಗೌಡ ಪಾಟೀಲ, ಬಿ.ಎಂ.ಕೋರೆ, ಎಸ್.ಕೆ.ಪಾಟೀಲ ಗಣ್ಯರು ಸೇರಿದಂತೆ ತದ್ದೇವಾಡಿ, ಮಣಂಕಲಗಿ, ಗೋಟ್ಯಾಳ, ಕೇರೂರ, ಜೇವೂರ, ಬರಡೋಲ, ಗೋಡಿಹಾಳ, ಏಳಗಿ, ಹಲಸಂಗಿ, ಧೂಳಖೇಡ, ಉಮದಿ, ಹತ್ತಳ್ಳಿ, ಚಡಚಣ, ಸುಸಲಾದ, ಶಿರಕನಹಳ್ಳಿ, ನಾಗಠಾಣ, ಹಾವಿನಾಳ, ಲವಗಿ, ಗ್ರಾಮದ ಭಕ್ತಾಧಿಗಳು ಪಾಲ್ಗೊಂಡಿದ್ದರು. ಕೆ.ಎಸ್.ಪಾಟೀಲ ಸ್ವಾಗತಿಸಿದರು. ಆರ್.ಕೆ.ಪಾಟೀಲ ನಿರೂಪಿಸಿದರು.

error: Content is protected !!