January 15, 2026

ಭದ್ರಾ ನಾಲೆ ಅಕ್ರಮ ಪಂಪ್ ಸೆಟ್ ತೆರವು ಕಾರ್ಯಾಚರಣೆ

ಮಾಯಕೊಂಡ; ಸಮೀಪದ ಭದ್ರಾ ನಾಲೆಯಲ್ಲಿ ಅಕ್ರಮವಾಗಿ ಅಳವಡಿಸಿದ ಮೋಟಾರ್ ತೆರವು ಕಾರ್ಯಾಚರಣೆ ಶನಿವಾರ ಪಡೆಯಿತು.ಭದ್ರಾ ಅಚ್ಚುಕಟ್ಟು ಭಾಗದಲ್ಲಿ ಇದೀಗ ನಾಟಿ ಭರದಿಂದ ಸಾಗಿದ್ದು, ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಜೆ ನೀರು ತಲುಪುತ್ತಿಲ್ಲ ಎಂದು ರೈತರು ಆರೋಪಿಸಿದ್ದರು.

ಜಿಲ್ಲಾಡಳಿತದ ಆದೇಶದ ಮೇರೆಗೆ ಉಪ ವಿಭಾಗಾಧಿಕಾರಿ ಸಂತೋಷ ಕುಮಾರ್ ನೇತೃತ್ವದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಲಾಯಿತು. ಕುರ್ಕಿ, ಅಣಬೇರು, ಬಾಡ, ನಲಕುಂದ ಮತ್ತಿತರ ಕಡೆ ನಾಲೆಯಲ್ಲಿ ಅಳವಡಿಸಲಾದ ಅಕ್ರಮ ಮೋಟಾರ್ ತೆರವುಗೊಳಿಸಲಾಯಿತು. ಸುಮಾರು ನೂರಕ್ಕೂ ಹೆಚ್ಚು ಮೋಟಾರ್ ತೆರವುಗೊಳಿಸಲಾಯಿತು. ಬೆಸ್ಕಾಂ ಅಧಿಕಾರಿಗಳು ಅಕ್ರಮ ಮೋಟಾರುಗಳ ವಿದ್ಯುತ್ ಸಂಪರ್ಕ ‌ಕಡಿತಗೊಳಿಸಿದರು.

ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಇಂಜಿನಿಯರ್ ಮನೋಜ್ ಕುಮಾರ್ ಮತ್ತು ಸಿಬ್ನಂದಿ, ಕಂದಾಯ ಇಲಾಖೆಯ ನಿರೀಕ್ಷಕ ಹಿರೇಗೌಡರು ಮತ್ತು ಸಿಬ್ಬಂದಿ, ಮಾಯಕೊಂಡ ಮತ್ತು ಹದಡಿ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!